International Journal of Multidisciplinary Trends
  • Printed Journal
  • Refereed Journal
  • Peer Reviewed Journal

2022, Vol. 4, Issue 2, Part B

ಬಂಜಾರ ಸಮುದಾಯದ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಗಳು: ಒಂದು ಅಧ್ಯಯನ


Author(s): ಭೀಮಣ್ಣ ಪೋಮಣ್ಣ ಲಮಾಣಿ, ಡಾ. ಶಹತಾಜ್ ಬೇಗಂ

Abstract: ಕರ್ನಾಟಕದಲ್ಲಿ ವಾಸಿಸುತ್ತಿರುವ ಹಲವಾರು ಬುಡಕಟ್ಟು ಜನಾಂಗಗಳಲ್ಲಿ ಬಂಜಾರ ಬುಡಕಟ್ಟು ಒಂದು ಜನಪ್ರೀಯ ಬುಡಕಟ್ಟಾಗಿದೆ. ಬಂಜಾರ ಸಮುದಾಯದವರು ಕಾಡು, ಮೇಡು, ಗುಡ್ಡಗಾಡುಗಳಲ್ಲಿ ವಾಸಿಸುತ್ತಾ ತಮ್ಮ ಜೀವನವನ್ನು ನಡೆಸುತ್ತಿರುವುದನ್ನು ಕಂಡಿದ್ದೆವೆ. ಬಂಜಾರರು ಪ್ರತ್ಯೇಕ ತಾಂಡಾಗಳನ್ನು ರಚಿಸಿಕೊಂಡು ತಮ್ಮದೇ ಆದ ಸಂಸ್ಕøತಿ, ಸಂಪ್ರದಾಯ, ಹಬ್ಬ ಹರಿದಿನಗಳ ಆಚರಣೆ ಹಾಗೂ ತಮ್ಮ ನ್ಯಾಯ ಪಂಚಾಯತಿಯನ್ನು ಉಳಿಸಿಕೊಂಡು ಬರುವಲ್ಲಿ ಯಶಸ್ವಿಯಾಗಿದ್ದಾರೆ. ಬಂಜಾರರನ್ನು ಲಮಾಣಿ, ಲಂಬಾಡಿ, ಬಂಜಾರೀ, ಸುಗಾಲಿ, ಬಣಜಾರ, ಡಾಡಿ ಇತ್ಯಾದಿ ಹೆಸುರುಗಳಿಂದ ಕರೆಯುತ್ತಾರೆ. ಯಾವುದೇ ಸಮುದಾಯವು ಸಾಮಾಜಿಕ ವ್ಯವಸ್ಥೆಯಲ್ಲಿ ಅತ್ಯಂತ ಮಹತ್ವವನ್ನು ಪಡೆಯಬೇಕಾದರೆ ಸಮುದಾಯವು ಸಾಮಾಜಿಕವಾಗಿ ಮತ್ತು ಶೈಕ್ಷಣಿಕದ ಅಂತಸ್ತು ಬಹಳ ಮುಖ್ಯವಾಗಿರುತ್ತದೆ. ಇಂದು ಸಮಾಜದ ಎಲ್ಲಾ ವಲಯಗಳಲ್ಲೂ ಶಿಕ್ಷಣದ ಮಹತ್ವ ಎದ್ದು ಕಾಣುತ್ತಿದೆ. ಸಮುದಾಯದಲ್ಲಿ ಪರಸ್ಪರ ವಿಶ್ವಾಸ, ಹೊಂದಾಣಿಕೆ, ಒಗ್ಗಟ್ಟು ಬೆಳೆಯಬೇಕಾದರೆ ಶಿಕ್ಷಣದ ಅನಿವಾರ್ಯತೆ ಅಗತ್ಯವಾಗಿದೆ. ಬಂಜಾರ ಸಮುದಾಯದ ಮಕ್ಕಳು ಸರ್ಕಾರದ ವಿವಿಧ ವಸತಿ ಶಾಲೆಗಳಲ್ಲಿ ಶಿಕ್ಷಣ ಪಡೆಯುತ್ತಿರುವುದನ್ನು ನೋಡಬಹುದು. ಅದೇ ರೀತಿ ಸಮುದಾಯದ ಮಹಿಳೆಯರು ತಮ್ಮ ಸಂಪ್ರದಾಯದ ಕಸೂತಿ ಕಲೆಗೆ ಆದ್ಯತೆ ನೀಡುತ್ತಿರುವುದು ಕಂಡುಬರುತ್ತದೆ. ಪ್ರಸ್ತುತ ಸಂಶೋಧನಾ ಅಧ್ಯಯನಕ್ಕೆ ಒಟ್ಟು 500 ಮಾಹಿತಿದಾರರನ್ನು ನಗರ ಮತ್ತು ಗ್ರಾಮೀಣ ಪ್ರದೇಶದಿಂದ ಆಯ್ಕೆ ಮಾಡಿಕೊಂಡಿದ್ದು, ಇವರ ಪ್ರಸ್ತುತ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಗಳನ್ನು ಅರಿಯಲು ಪ್ರಶ್ನಾವಳಿಗಳ ಮೂಲಕ ಸಮೀಕ್ಷಾ ವಿಧಾನವನ್ನು ಅನುಸರಿಸಿ ದತ್ತಾಂಶಗಳನ್ನು ಸಂಗ್ರಹಿಸಲಾಯಿತು.

Pages: 95-99 | Views: 479 | Downloads: 192

Download Full Article: Click Here

International Journal of Multidisciplinary Trends
How to cite this article:
ಭೀಮಣ್ಣ ಪೋಮಣ್ಣ ಲಮಾಣಿ, ಡಾ. ಶಹತಾಜ್ ಬೇಗಂ. ಬಂಜಾರ ಸಮುದಾಯದ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಗಳು: ಒಂದು ಅಧ್ಯಯನ. Int J Multidiscip Trends 2022;4(2):95-99.
International Journal of Multidisciplinary Trends
Call for book chapter
Journals List Click Here Research Journals Research Journals